" ಎಂಜಲು ಊಟ ಸರ್ವಥಾ ಮಾಡಬಾರದು - ನಿಷಿದ್ಧ "
ಹೇಗೆ ಕುಷ್ಠು ರೋಗಿಯೊಂದಿಗೆ ಊಟ ಮಾಡುವುದರಿಂದ ಒಳ್ಳೆಯ ಮನುಷ್ಯನ ರಕ್ತವೂ ಕೂಡ ಕೆಟ್ಟು ಹೋಗುತ್ತದೋ ಹಾಗೆ ಬೇರೆಯವರೊಂದಿಗೆ ತಿನ್ನುವುದರಲ್ಲಿಯೂ ಕೇಡೇ ಆಗುತ್ತದೆ. ಅದು ಸುಧಾರಣೆಯಲ್ಲ!
ನೋಚ್ಛಿಷ್ಟ೦ ಕಸ್ಯಚಿದ್ದದ್ಯಾನ್ನಾದ್ಯಾಚ್ಚೈವ ತಥಾ೦ತರಾ ।
ನ ಚೈವಾತ್ಯಶನಂ ಕುರ್ಯಾನ್ನ ಚೋಚ್ಛಿಷ್ಟ: ಕ್ವಚಿದ್ವ್ರಜೇತ್ ।। ಮನು ೨/೫೬ ।।
ತನ್ನ ಎಂಜಲು ಪದಾರ್ಥವನ್ನು ಯಾವನಿಗೂ ಕೊಡಬಾರದು. ಯಾವನಾದರೂ ಊಟದ ನಡುವೆ ತಾನೂ ತಿನ್ನಬಾರದು. ಅತಿಯಾಗಿ ಊಟವನ್ನು ಮಾಡಬಾರದು. ಭೋಜನಾನಂತರ ಕೈ ಬಾಯಿ ತೊಳೆದುಕೊಳ್ಳದೆ ಎಲ್ಲಿಯೂ ಅತ್ತ ಇತ್ತ ಅಡ್ಡಾಡಬಾರದು.
ಅಂತೆಯೇ ಸ್ತ್ರೀ - ಪುರುಷರೂ ಕೂಡಾ ಎಂಜಲು ಊಟ ಮಾಡಬಾರದು. ಏಕೆಂದರೆ ಅವರ ಶರೀರಗಳ ಗುಣ ಸ್ವಭಾವವೂ ಬೇರೆ ಬೇರೆಯಾಗಿವೆ.
" ಗುರೋರುಚ್ಛಿಷ್ಟ ಭೋಜನಮ್ " ಯೆಂದರೆ......
ಗುರುವಿನ " ಭೋಜನ " ಆದ ನಂತರ ಯಾವ ಪ್ರತ್ಯೇಕವಾದ ಆಹಾರವು ಶುದ್ಧವಾಗಿಡಲ್ಪಟ್ಟಿದೆಯೋ ಅದನ್ನು ಭಕ್ಷಿಸಬೇಕು. ಅಂದರೆ...
ಮೊದಲಿಗೆ ಗುರುಗಳಿಗೆ ಭೋಜನ ಮಾಡಿಸಿ, ಆ ಮೇಲೆ ಶಿಷ್ಯನು ಭೋಜನ ಮಾಡಬೇಕು. ಎನ್ನುವುದು ಇದರ ಅರ್ಥವಾಗಿದೆ. ( ಎಂಜಲು ತಿನ್ನಬೇಕೆಂದಲ್ಲ )
ಸಂಗ್ರಹಃ :-
ಗುರು ವಿಜಯ ಪ್ರತಿಷ್ಠಾನ
0 Comments